1.ಸರೋಜಿನಿ ಮಹಿಶಿ ವರದಿ ಅನುಷ್ಠಾನ, ನ್ಯಾಯಾಲಯದಲ್ಲಿ ಪ್ರಶ್ನಾತೀರ್ತ ಕಾನೂನು ಕಾಯ್ದೆ ಜಾರಿ. 2.ಬಂಡೀಪುರ-ಕೇರಳ ದಾರಿಯ ಹೆದ್ದಾರಿ ತಡೆಹಿಡಿರಿ; ಇದರಿಂದ ಕರ್ನಾಟಕ ಕ್ಕೆ ಒಳಿತು ಇಲ್ಲ,ಕಾಡು ಹಾಳು, ಮಳೆಯು ಕಮ್ಮಿ ಆಗತ್ತೆ. ಈತರ ಯಾವುದೇ ಹೆದ್ದಾರಿ,ರೈಲ್ವೆ ಬಾಗ ಇಂತಹ ಪಶ್ಚಿಮ ಘಟ್ಟ ಮತ್ತು ಕೊಡಗು ಬಾಗದಲ್ಲಿ ಬೇಡ.. 3. #IBPS ಮೋಸ ;೨೦೧೪ ರ ನಿಯಮ ಬೇಕು. ಆಮೇಲೆ ಇನ್ಮುಂದೆ ಕೇಂದ್ರೀಕರಣಗೊಳಿಸುವಾಗ; ಅದಕ್ಕೆ ರಾಜ್ಯ ಮುಂಜಾಗುರತೆ ವಹಿಸಬೇಕು. ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕ್ ಗಳನ್ನು ನಾವು ವಿಲೀನದ ಹೆಸರಿನಲ್ಲಿ ಕಳೆದು ಕೊಳ್ಳುತ್ತಿದ್ದೇವೆ. 4. ಎಲ್ಲಾ ಕೊಳ್ಳುಗ/ಗ್ರಾಹಕ ಸೇವೆಯೂ ಕರುನಾಡಲ್ಲಿ ಕನ್ನಡದಲ್ಲಿ ಬೇಕು. ಬಳಸುವ ಸೇವೆ,ವಸ್ತು,ಅರಿಮೆ,ಚಳಕ.. ಇದಕ್ಕೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಕೇಳ್ವಿ/ಪ್ರಶ್ನೆ ಬಾರದಂತೆ.. ಒಂದು ಕಾಯ್ದೆ ಕಾನೂನು ಕಟ್ಟಳೆ ಮಾಡಿ.ಮಂಡಿಸಿ.. ಉದಾ: ೧.ಬ್ಯಾಂಕ್ ಸೇವೆ, ಇಲ್ಲಿ ಮಾರಾಟವಾಗುವ ಉತ್ಪನ್ನ ಗಳ ಮೇಲೆ ಕನ್ನಡ. ೨.ಔಷದಿ, ಮದ್ದು,ಅರವಳಿಕೆ ಗಳ ಮೇಲೆ ಮಾಹಿತಿ ಕನ್ನಡದಲ್ಲಿ ಇದ್ದರೆ ಜನರಿಗೆ ಅದರ ಬಗ್ಗೆ ತಿಳಿದು ಬಳಸಲು ಸೂಕ್ತ. ೩.ಗ್ಯಾಸ್ ಇತ್ಯಾದಿ ಮೇಲೆ ಕನ್ನಡ ದಲ್ಲಿ ಸುರಕ್ಷತಾ ನಿಯಮ ಬೇಕು. ೪. ಹೆಸರು ಪಟ್ಟಿ/ ನಮ ಫಲಕ ಕನ್ನಡ ಹೆಚ್ಚಾಗಿ /ದೊಡ್ಡದಾಗಿ ಇರಬೇಕು. ಒಟ್ಟಿನಲ್ಲಿ ಒಂದು ಸಮಗ್ರ ಕಾನೂನು ಬೇಕು. 5.ಕೊಡಗು ಅಂತಹ ಜಾಗದಲ್ಲೂ ವಲಸೆ ಎಲ್ಲೆ ಮೀರಿದೆ....
ಡಬ್ಬಿಂಗ್ ಕನ್ನಡಕ್ಕೆ ಬೇಕು ಅನ್ನೋದರಲ್ಲೇ ಉಪೇಂದ್ರ ಅವರ ಗೊಂದಲಮಯ ನಿಲುವು ಮತ್ತು ಜನರ ಮಿಡಿತ/ಹಕ್ಕು ಅರಿಯುವ ಕೊರತೆಯನ್ನು ತೋರಿಸತ್ತೆ.. ಅವರ ಪ್ರಶ್ನೆಗಳಿಗೆ ಉತ್ತರ: ೧.ಪರಬಾಷಾ ಚಾನೆಲ್ ಗೆ ಸಂದರ್ಶನ ಬಾಗ.. ನೀವ್ ಸತ್ಯವನ್ನೇ ಹೇಳಿದ್ದರೆ ಅದಕ್ಕೆ ನೇರ ಉತ್ತರ: "ಕರ್ನಾಟಕದಲ್ಲಿನ ಡಬ್ಬಿಂಗ್ ನಿಷೇಧವೆ ಪರಬಾಷೆ ಚಿತ್ರಗಳ ಮಾರುಕಟ್ಟೆ ಹೆಚ್ಚಣಕ್ಕೆ ಪರೋಕ್ಷ ಕಾರಣ". ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಡೋ ಮರು ಪ್ರಶ್ನೆ ಹಾಕ್ತಿರ.. ೨.ನೇರ ಬಿಡುಗಡೆ vs (ನೇರ ತೆರೆ ಬಿಡುಗಡೆ+ ಡಬ್ಬಿಂಗ್ ) ಯಾವುದು ಬೇಕು.. ಇದರಿಂದ ಕನ್ನಡಕ್ಕೆ ತೊಂದರೆ ಆಗಲ್ವಾ?? ಉ: ತೆಲುಗು ತಮಿಳರಂತೆ ಡಬ್ಬಿಂಗ್ ಆಸ್ಪದ ಕೊಟ್ಟಿದ್ರೆ ; ಈ ಚರ್ಚೆಯೇ ಇರ್ತಿರ್ಲಿಲ್ಲ.. ನಮ್ಮ ಸಂವಿದಾನದ ಪ್ರಕಾರ ನೇರ ಪರಬಾಷೆ ತಡೆಯಲು ಸಾದ್ಯವಿಲ್ಲ ಆದರೆ ಡಬ್ಬಿಂಗ್ ಅನ್ನು ಮುಖ್ಯವಾಹಿನಿ ಗೆ ತಂದಾಗ ಕ್ರಮೇಣ ಜನ ಉತ್ತಮ ಗುಣಮಟ್ಟದ ಡಬ್ಬಿಂಗ್ ಚಿತ್ರ ವನ್ನೇ ನೋಡಲು ಮುಂದಾಗ್ತಾರೆ..(೮೦-೨೦ ಅನುಪಾತ ದಲ್ಲಿ ಬಿಡುಗಡೆ ಆದರೂ ಅದು ದೊಡ್ಡ ಸಾದನೆ) ಇಷ್ಟು ದಿನ ಡಬ್ಬಿಂಗ್ ತಡೆದು ಪರನುಡಿ ನೇರ ನೋಡೋ ಹಾಗೆ ಅನಿವಾರ್ಯ ಮಾಡಿ; ಡಬ್ಬಿಂಗ್ ಚಿತ್ರ ನೋಡೋಕೆ ಅವಕಾಶ ಕೊಡದೆ; ಕನ್ನಡಿಗರು ಪರನುಡಿ ಚಿತ್ರ ನೋಡ್ತಾರೆ ಅಂತ ಬೊಬ್ಬೆ ಹೊಡಿದ್ರೆ?? ಈಗ ಸುಮಾರು ಪೆಟ್ಟು ಕೊಟ್ಟಿದ್ದೀರಿ ; ತಕ್ಷಣ ಅಲ್ಲದಿದ್ದರೂ ಕ್ರಮೇಣ ನೇರ ನುಡಿ ಬಿಡುಗಡೆ ಇಳಿಮುಖ ಆಗತ್ತೆ.. ಕರ್ನಾಟ...