ವಿಷಯಕ್ಕೆ ಹೋಗಿ

ಉಪ್ಪಿಗಾಗಿ ನನ್ನ ಕೇಳ್ವಿ ಮತ್ತು ಮನವಿ

3 ಕೇಳ್ವಿಗಳು ಮತ್ತು ಮನವಿ:
೧. ಜಾಗತೀಕರಣದ ಹಿನ್ನೆಲೆಯಿಂದ
 ಜಗತ್ತಿನ ಎಲ್ಲಾ ಅರಿಮೆ, ಜ್ಞಾನ, ಆಟ,ಮನೋರಂಜನೆ ಮಾತೃ ಬಾಷೆಲಿ ಪಡೆಯಲು  ಡಬ್ಬಿಂಗ್/ಮಾತಚ್ಚು ಅತಿ ಅವಶ್ಯಕ. ಇದಕ್ಕೆ ಕನ್ನಡ ಮಾರುಕಟ್ಟೆ ಚಿಕ್ಕದು/ಕೆಲಸ ಹೋಗತ್ತೆ ಇವೆಲ್ಲ ಡೋಂಗಿ ಉತ್ತರ..ಮಾರುಕಟ್ಟೆ ಚಿಕ್ಕದು ಮಾಡಿಕೊಂಡು ಬಾವಿಯಲ್ಲಿನ ಕಪ್ಪೆ ತನ ತೋರದಕ್ಕೆ KFI ಕಾರಣ.
*.Artificial Intelligence/ಕೃತಕ ಜಾಣ್ಮೆ ಬಂದ್ರೆ ಇರೋ ಸಾಫ್ಟ್ವೇರ್ ಜನ ಕೆಲ್ಸ ಕಳ್ಕೊತಾರೆ ಅನ್ನೋದು ಸರಿನ? ನಾವು ಪೈಪೋಟಿ ಮಾಡಿ ಜಯಿಸ್ತಿವ್ ಅನ್ನೋದ್ ಸರಿನ?
*.ಈಗ ದೊಡ್ಡ ಬ್ಯಾನರ್ ಅವ್ರು ಇಲ್ಲಿನವರ್ಗೆ ಎಷ್ಟ್ ಕೆಲ್ಸ ಕೊಡ್ತಾರ್?
ಡಬ್ಬಿಂಗ್ ಸ್ಟುಡಿಯೋ ಸೇರಿದಂತೆ ,ಸಂಭಾಷಣೆ, ಹಾಡು ಇತ್ಯಾದಿ ಜನಕ್ಕೆ ಕೆಲಸ ಸಿಗೋದ್ರು ಜೊತೆಗ್ ನಮ್ಮಲ್ಲೂ ತಮಿಳು/ತೆಲುಗು/ಹಿಂದಿ ಪೈಪೋಟಿ(ಮಾರುಕಟ್ಟೆ ದೃಷ್ಟಿ) ಮಾಡೋ ಅನಿವಾರ್ಯತೆ ಬಂದು ಒಳ್ಳೆದೆ ಆಗತ್ತೆ. ಕ್ರಮೇಣ ನೇರ ತೆರೆ ಬಿಡುಗಡೆ ಕಮ್ಮಿ ಆಗತ್ತೆ(ಇದಕ್ಕೆ ಕಾರಣ KFI ಹತೋಟಿ ಕೂಟಗಳು, ನೇರ 400 ತೆರೆ ಕೊಡ್ತೀವಿ ಡಬ್ಬಿಂಗ್  ಮಾಡ್ಬೇಡಿ ಅಂದ್ರೆ ಹೇಗ್ ಬೆಳಿಯತ್ತೆ ).

ಹೇಗೂ  ಪರಭಾಷೆಗೆ ೩೦೦-೪೦೦  ನೇರ ತೆರೆ ಕೊಟ್ಟು ನಮ್ ಜನ ಕನ್ನಡ ನೋಡಲ್ಲ ಅಂತ ಹೇಳ್ತೀರಾ?
ನೋಡಕ್ ಅವಕಾಶ ಕೊಡಲ್ಲ?
ಇಲ್ಲಿ ಇರೋ ಬಾಷಾ ಅಲ್ಪ ಸಂಖ್ಯಾತರಿಗೆ ಅವರ ನುಡಿಲಿ ನೇರ ಚಿತ್ರ ನೋಡೋಕೆ ಸಿಗತ್ತೆ.(ತಮಿಳ್ ಚಿತ್ರ ತೆಲುಗು ಡಬ್ ಆಗಿ ಬಿಡ್ತಾರೆ).
ಡಬ್ಬಿಂಗ್ ತಡೆದು ಸಾದ್ಸಿದ್ ಏನು ಇದೆ??
 ಇಗ್ಲಾರು ಕನ್ನಡೀಕರಣ ಆಗಿ ಬಿಡುಗಡೆ ಆಗ್ಲಿ..

ಅಂಕಿ ಅಂಶ:
ತಮಿಳು :  ವರ್ಷಕ್ಕೆ ೨೦೦ ಓಡು ತಿಟ್ಟ/ಚಿತ್ರ.
೧೫ ದೊಡ್ಡ ನಟರ ಮತ್ತು ಲಾಭದಾಯಕ ದೊಡ್ಡ ಹಿಟ್ ಚಿತ್ರ.
ಇವರಿಂದ ವರ್ಷಕ್ಕೆ ೩೦ ಚಿತ್ರ ಬರತ್ತೆ..
ಕನ್ನಡ ೫ ದೊಡ್ಡ ನಟರು..
ವರ್ಷಕ್ಕೆ  ೬ ದೊಡ್ಡ ಚಿತ್ರ..
ಹೇಗೆ ಸಾಧ್ಯ ಸಾರ್ ಹೀಗಾದ್ರೆ?

ಕನ್ನಡಿಗರು ತಮಿಳರ 70% ಇದಾರೆ ಜನಸಂಖ್ಯೆಲಿ ಜೊತೆಗೆ
ಕಾಸರಗೋಡು, ಹೈದೆರಬಾದ್, ಕೊಲ್ಲಿ/ಗಾಲ್ಫ್ ದೇಶ, ಕರಾವಳಿ ಇವರ ಮಾರುಕಟ್ಟೆ ಮತ್ತೆ ಬಳಸಿಕೊಳ್ಳಿ.
ಆಂದ್ರ/ಹೈದೆರಬಾದ್, ತಮಿಳುನಾಡಲ್ಲಿ ಕನ್ನಡ ೩ನೆ ದೊಡ್ಡ ಬಾಷೆ.ನೆಪ ಬೇಡ.
ಇಲ್ಲೆ ನಾವು ಗೆಲ್ಲದಿದ್ರೆ ಪ್ರಜಾಕೀಯ ದಲ್ಲಿ ನಿರಂತರ ಗೆಲುವಿನ ಸಾಕಾರ ಹೇಗೆ?
 #(I'm)possible ಅಂತಿರಲಾ ಮತ್ತೆ.
ನಿಮ್ಮದು ಉದ್ಯಮ ಆದ್ರೆ ಜನರ ಮೇಲೆ ಮನೋರಂಜನೆ/ಸಿನಿಮಾ ದೊಡ್ಡ ಪ್ರಭಾವ ಬೀರತ್ತೆ ೧೦ ಪಟ್ಟು ವೇಗದಲ್ಲಿ ತಲುಪತ್ತೆ.. ಇದು ಕನ್ನಡದಲ್ಲಿ ಇರಬೇಕು..
ಕನ್ನಡಕ್ಕಿಂತ ದೊಡ್ಡವರು ಇಲ್ಲ.
 ನ್ಯಾಯಾಲಯ ತೀರ್ಪು ಬಂದಿದೆ;ನಮ್ಮ ಹಕ್ಕು ಎತ್ತಿ ಹಿಡಿದಿದೆ ತೆರೆ ಹಿಂದೆ/ ಮುಂದೆ ಎಲ್ಲೂ ಡಬ್ಬಿಂಗ್ ತಡೆಯೊದ್ ಬೇಡ..

ನಮ್ಮ ಸುತ್ತಲಿನ ವಾತಾವರಣ ಕನ್ನಡ ಮಯ ವಾಗಿರಬೇಕು.
ಡಬ್ಬಿಂಗ್/ಮಾತಚ್ಚು ನುಡಿ ಹಮ್ಮುಗೆ/language planning ನ ಒಂದು ಬಾಗ ಅಷ್ಟೇ.
ಉದಾ: ಪ್ರತಿ ಗ್ರಾಹಕ ಸೇವೆ,ಉತ್ಪನ್ನ ಕನ್ನಡದಲ್ಲೇ ಪಡಿಬೇಕು.

೨. ಶಂಕರ್ ಅವರ ಸಲಹೆ ಒಳ್ಳೇದಿದೆ.
ನೀವ್ #ಹಾಲಿವುಡ್(2002, Hollywood) ಅಂತ ಚಿತ್ರ  ಕತೆ ಮಾಡ್ತೀರಾ ಆದ್ರೆ ಆಮೇಲೆ ಅದಕ್ಕೆ ತಕ್ಕ ಹಾಗೆ ನಿರ್ಮಾಪಕ, ಗ್ರಾಫಿಕ್ಸ್ ಹುಡುಕಿ ದೊಡ್ಡ ಮಟ್ಟದಲ್ಲಿ  ಮಾಡಿದ್ರೆ
ರೋಬೋ/ROBO ಗಿಂತ ಮುಂಚೆ ನಮ್ KFI ಮಿಂಚೋದು.
ನಿಮಗೆ ನೂರು ಕಾರಣ ಇರ್ಬೋದು ಕಷ್ಟ ಇದ್ದಿರ್ಬೋದು ಅದು ಮೀರಿದ್ರೆ ಮಾತ್ರ ಅಬ್ದುತ ಆಗೋದು.
ನಿಮ್ಮಲ್ಲಿ ಅತ್ವ ಇಲ್ಲಿ KFI  ಪ್ರತಿಭೆ ಕೊರತೆ ಇಲ್ಲಾ ಆದ್ರೆ ನಮ್ಮದಿಷ್ಟೇ ಅನ್ನೋ ಬೇಲಿ  ಹಾಕಣದ್ಬಿಡಿ.
10 ಸಿನಿಮಾ ಯಾರಿಗೋಸ್ಕರ ನಟಿಸೋ ಬದ್ಲು
ನಿರ್ದೇಶನ ಮಾಡಿ/ ಅಲ್ಲೊಂದು ಇಲ್ಲೊಂದು ನಟಿಸಿ. 10 ಸಿನಿಮಾ ದುಡ್ಡು ನಿಮ್ಮ ಒಂದು ನಿರ್ದೇಶನದಲ್ಲಿ ತಗೆಯೋ ತಾಕತ್ತು ಇದೆ ನಿಮ್ಗೆ.
ಇದಾದ್ರೆ ಡಬ್ಬಿಂಗ್ ಯಾಕೆ ಹೇದುರ್ಬೇಕು? ರೀಮೇಕ್ ಯಾಕ್ ಬೇಕ್.?

೩. ಪ್ರಜಾಕೀಯ / ಚಿತ್ರ ಎರಡೂ ತೂಗಿಸಿಕೊಂಡು ಹೋಗೋದಾರೆ ಎರಡೂ ಮಾಡಬೋದು.ಇಲ್ಲಾ ಒಂದು ಮಾಡಿ.
ಪ್ರಜಾಕೀಯ ನಿರಂತರ ನಮ್ಮ #way f lifeಆಗೋ ಅಂತದ್ದು.
ಆಮೇಲೆ ಒಂದು ಸ್ಪಷ್ಟ ಚಿತ್ರಣ ಕೊಡಿ
*.ಲೋಕಸಭೆ ಗೆ ಈ ಸಲ ಪ್ರಜಾಕೀಯ ದಿಂದ ಜನ ಕಣಕ್ಕೆ ಸ್ಪರ್ಧೆ ಮಾಡ್ತಾರಾ?
ಕ್ಷೇತ್ರವಾರು ಅಭ್ಯರ್ಥಿ ಪಟ್ಟಿ?
ಇಲ್ಲವಾದರೆ ಯಾವಾಗ ಸ್ಪರ್ಧೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ಣಾಟಕ ತತ್ ಕ್ಷಣದಲ್ಲಿ ಮಾಡಬೇಕಾದ ಕೆಲಸ; Things to do for wellness of Karnataka and hence India

1.ಸರೋಜಿನಿ ಮಹಿಶಿ ವರದಿ ಅನುಷ್ಠಾನ,  ನ್ಯಾಯಾಲಯದಲ್ಲಿ ಪ್ರಶ್ನಾತೀರ್ತ ಕಾನೂನು ಕಾಯ್ದೆ ಜಾರಿ. 2.ಬಂಡೀಪುರ-ಕೇರಳ ದಾರಿಯ ಹೆದ್ದಾರಿ ತಡೆಹಿಡಿರಿ; ಇದರಿಂದ ಕರ್ನಾಟಕ ಕ್ಕೆ ಒಳಿತು ಇಲ್ಲ,ಕಾಡು ಹಾಳು, ಮಳೆಯು ಕಮ್ಮಿ ಆಗತ್ತೆ. ಈತರ ಯಾವುದೇ ಹೆದ್ದಾರಿ,ರೈಲ್ವೆ ಬಾಗ ಇಂತಹ ಪಶ್ಚಿಮ ಘಟ್ಟ ಮತ್ತು ಕೊಡಗು ಬಾಗದಲ್ಲಿ ಬೇಡ.. 3. #IBPS ಮೋಸ ;೨೦೧೪ ರ ನಿಯಮ ಬೇಕು. ಆಮೇಲೆ ಇನ್ಮುಂದೆ ಕೇಂದ್ರೀಕರಣಗೊಳಿಸುವಾಗ; ಅದಕ್ಕೆ ರಾಜ್ಯ ಮುಂಜಾಗುರತೆ ವಹಿಸಬೇಕು. ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕ್ ಗಳನ್ನು ನಾವು ವಿಲೀನದ ಹೆಸರಿನಲ್ಲಿ ಕಳೆದು ಕೊಳ್ಳುತ್ತಿದ್ದೇವೆ. 4. ಎಲ್ಲಾ ಕೊಳ್ಳುಗ/ಗ್ರಾಹಕ ಸೇವೆಯೂ ಕರುನಾಡಲ್ಲಿ ಕನ್ನಡದಲ್ಲಿ ಬೇಕು. ಬಳಸುವ ಸೇವೆ,ವಸ್ತು,ಅರಿಮೆ,ಚಳಕ.. ಇದಕ್ಕೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಕೇಳ್ವಿ/ಪ್ರಶ್ನೆ ಬಾರದಂತೆ.. ಒಂದು ಕಾಯ್ದೆ ಕಾನೂನು ಕಟ್ಟಳೆ ಮಾಡಿ.ಮಂಡಿಸಿ.. ಉದಾ: ೧.ಬ್ಯಾಂಕ್ ಸೇವೆ, ಇಲ್ಲಿ ಮಾರಾಟವಾಗುವ ಉತ್ಪನ್ನ ಗಳ ಮೇಲೆ ಕನ್ನಡ. ೨.ಔಷದಿ, ಮದ್ದು,ಅರವಳಿಕೆ ಗಳ ಮೇಲೆ  ಮಾಹಿತಿ ಕನ್ನಡದಲ್ಲಿ ಇದ್ದರೆ ಜನರಿಗೆ ಅದರ ಬಗ್ಗೆ ತಿಳಿದು ಬಳಸಲು ಸೂಕ್ತ. ೩.ಗ್ಯಾಸ್ ಇತ್ಯಾದಿ ಮೇಲೆ ಕನ್ನಡ ದಲ್ಲಿ ಸುರಕ್ಷತಾ ನಿಯಮ ಬೇಕು. ೪. ಹೆಸರು ಪಟ್ಟಿ/ ನಮ ಫಲಕ ಕನ್ನಡ ಹೆಚ್ಚಾಗಿ /ದೊಡ್ಡದಾಗಿ ಇರಬೇಕು. ಒಟ್ಟಿನಲ್ಲಿ ಒಂದು ಸಮಗ್ರ ಕಾನೂನು ಬೇಕು. 5.ಕೊಡಗು ಅಂತಹ ಜಾಗದಲ್ಲೂ ವಲಸೆ ಎಲ್ಲೆ ಮೀರಿದೆ....

ಉಪೇಂದ್ರ ಅವರ ಕೇಳ್ವಿಗೆ ಮರು ಕೇಳ್ವಿ/ಉತ್ತರ

ಡಬ್ಬಿಂಗ್  ಕನ್ನಡಕ್ಕೆ ಬೇಕು ಅನ್ನೋದರಲ್ಲೇ ಉಪೇಂದ್ರ ಅವರ  ಗೊಂದಲಮಯ ನಿಲುವು ಮತ್ತು ಜನರ ಮಿಡಿತ/ಹಕ್ಕು ಅರಿಯುವ ಕೊರತೆಯನ್ನು ತೋರಿಸತ್ತೆ.. ಅವರ ಪ್ರಶ್ನೆಗಳಿಗೆ ಉತ್ತರ: ೧.ಪರಬಾಷಾ ಚಾನೆಲ್ ಗೆ ಸಂದರ್ಶನ ಬಾಗ.. ನೀವ್ ಸತ್ಯವನ್ನೇ ಹೇಳಿದ್ದರೆ ಅದಕ್ಕೆ ನೇರ ಉತ್ತರ: "ಕರ್ನಾಟಕದಲ್ಲಿನ ಡಬ್ಬಿಂಗ್ ನಿಷೇಧವೆ ಪರಬಾಷೆ ಚಿತ್ರಗಳ ಮಾರುಕಟ್ಟೆ ಹೆಚ್ಚಣಕ್ಕೆ ಪರೋಕ್ಷ ಕಾರಣ". ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಡೋ ಮರು ಪ್ರಶ್ನೆ ಹಾಕ್ತಿರ.. ೨.ನೇರ ಬಿಡುಗಡೆ vs (ನೇರ ತೆರೆ ಬಿಡುಗಡೆ+ ಡಬ್ಬಿಂಗ್ ) ಯಾವುದು ಬೇಕು.. ಇದರಿಂದ ಕನ್ನಡಕ್ಕೆ ತೊಂದರೆ ಆಗಲ್ವಾ?? ಉ: ತೆಲುಗು ತಮಿಳರಂತೆ ಡಬ್ಬಿಂಗ್  ಆಸ್ಪದ ಕೊಟ್ಟಿದ್ರೆ ; ಈ ಚರ್ಚೆಯೇ ಇರ್ತಿರ್ಲಿಲ್ಲ.. ನಮ್ಮ ಸಂವಿದಾನದ ಪ್ರಕಾರ ನೇರ ಪರಬಾಷೆ ತಡೆಯಲು ಸಾದ್ಯವಿಲ್ಲ ಆದರೆ ಡಬ್ಬಿಂಗ್ ಅನ್ನು ಮುಖ್ಯವಾಹಿನಿ ಗೆ ತಂದಾಗ ಕ್ರಮೇಣ ಜನ ಉತ್ತಮ ಗುಣಮಟ್ಟದ ಡಬ್ಬಿಂಗ್ ಚಿತ್ರ ವನ್ನೇ ನೋಡಲು ಮುಂದಾಗ್ತಾರೆ..(೮೦-೨೦ ಅನುಪಾತ ದಲ್ಲಿ ಬಿಡುಗಡೆ ಆದರೂ ಅದು ದೊಡ್ಡ ಸಾದನೆ) ಇಷ್ಟು ದಿನ ಡಬ್ಬಿಂಗ್ ತಡೆದು ಪರನುಡಿ ನೇರ ನೋಡೋ ಹಾಗೆ ಅನಿವಾರ್ಯ ಮಾಡಿ; ಡಬ್ಬಿಂಗ್ ಚಿತ್ರ ನೋಡೋಕೆ ಅವಕಾಶ ಕೊಡದೆ; ಕನ್ನಡಿಗರು ಪರನುಡಿ ಚಿತ್ರ ನೋಡ್ತಾರೆ ಅಂತ ಬೊಬ್ಬೆ ಹೊಡಿದ್ರೆ?? ಈಗ ಸುಮಾರು ಪೆಟ್ಟು ಕೊಟ್ಟಿದ್ದೀರಿ ; ತಕ್ಷಣ ಅಲ್ಲದಿದ್ದರೂ ಕ್ರಮೇಣ ನೇರ ನುಡಿ ಬಿಡುಗಡೆ ಇಳಿಮುಖ ಆಗತ್ತೆ.. ಕರ್ನಾಟ...