ವಿಷಯಕ್ಕೆ ಹೋಗಿ

ಉಪೇಂದ್ರ ಅವರ ಕೇಳ್ವಿಗೆ ಮರು ಕೇಳ್ವಿ/ಉತ್ತರ

ಡಬ್ಬಿಂಗ್  ಕನ್ನಡಕ್ಕೆ ಬೇಕು ಅನ್ನೋದರಲ್ಲೇ ಉಪೇಂದ್ರ ಅವರ  ಗೊಂದಲಮಯ ನಿಲುವು ಮತ್ತು ಜನರ ಮಿಡಿತ/ಹಕ್ಕು ಅರಿಯುವ ಕೊರತೆಯನ್ನು ತೋರಿಸತ್ತೆ..
ಅವರ ಪ್ರಶ್ನೆಗಳಿಗೆ ಉತ್ತರ:
೧.ಪರಬಾಷಾ ಚಾನೆಲ್ ಗೆ ಸಂದರ್ಶನ ಬಾಗ..
ನೀವ್ ಸತ್ಯವನ್ನೇ ಹೇಳಿದ್ದರೆ ಅದಕ್ಕೆ ನೇರ ಉತ್ತರ:
"ಕರ್ನಾಟಕದಲ್ಲಿನ ಡಬ್ಬಿಂಗ್ ನಿಷೇಧವೆ ಪರಬಾಷೆ ಚಿತ್ರಗಳ ಮಾರುಕಟ್ಟೆ ಹೆಚ್ಚಣಕ್ಕೆ ಪರೋಕ್ಷ ಕಾರಣ".
ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಡೋ ಮರು ಪ್ರಶ್ನೆ ಹಾಕ್ತಿರ..
೨.ನೇರ ಬಿಡುಗಡೆ vs (ನೇರ ತೆರೆ ಬಿಡುಗಡೆ+ ಡಬ್ಬಿಂಗ್ )
ಯಾವುದು ಬೇಕು.. ಇದರಿಂದ ಕನ್ನಡಕ್ಕೆ ತೊಂದರೆ ಆಗಲ್ವಾ??
ಉ: ತೆಲುಗು ತಮಿಳರಂತೆ ಡಬ್ಬಿಂಗ್  ಆಸ್ಪದ ಕೊಟ್ಟಿದ್ರೆ ; ಈ ಚರ್ಚೆಯೇ ಇರ್ತಿರ್ಲಿಲ್ಲ..
ನಮ್ಮ ಸಂವಿದಾನದ ಪ್ರಕಾರ ನೇರ ಪರಬಾಷೆ ತಡೆಯಲು ಸಾದ್ಯವಿಲ್ಲ ಆದರೆ ಡಬ್ಬಿಂಗ್ ಅನ್ನು ಮುಖ್ಯವಾಹಿನಿ ಗೆ ತಂದಾಗ ಕ್ರಮೇಣ ಜನ ಉತ್ತಮ ಗುಣಮಟ್ಟದ ಡಬ್ಬಿಂಗ್ ಚಿತ್ರ ವನ್ನೇ ನೋಡಲು ಮುಂದಾಗ್ತಾರೆ..(೮೦-೨೦ ಅನುಪಾತ ದಲ್ಲಿ ಬಿಡುಗಡೆ ಆದರೂ ಅದು ದೊಡ್ಡ ಸಾದನೆ)
ಇಷ್ಟು ದಿನ ಡಬ್ಬಿಂಗ್ ತಡೆದು ಪರನುಡಿ ನೇರ ನೋಡೋ ಹಾಗೆ ಅನಿವಾರ್ಯ ಮಾಡಿ; ಡಬ್ಬಿಂಗ್ ಚಿತ್ರ ನೋಡೋಕೆ ಅವಕಾಶ ಕೊಡದೆ; ಕನ್ನಡಿಗರು ಪರನುಡಿ ಚಿತ್ರ ನೋಡ್ತಾರೆ ಅಂತ ಬೊಬ್ಬೆ ಹೊಡಿದ್ರೆ??
ಈಗ ಸುಮಾರು ಪೆಟ್ಟು ಕೊಟ್ಟಿದ್ದೀರಿ ; ತಕ್ಷಣ ಅಲ್ಲದಿದ್ದರೂ ಕ್ರಮೇಣ ನೇರ ನುಡಿ ಬಿಡುಗಡೆ ಇಳಿಮುಖ ಆಗತ್ತೆ..
ಕರ್ನಾಟಕದಲ್ಲಿ ಕನ್ನಡ ಅಲ್ಪಸಂಖ್ಯಾತ ನುಡಿ ಅಲ್ಲಾ ಸ್ವಾಮಿ..
 ಆಮೇಲೆ ಇಷ್ಟು ದಿನ ಡಬ್ಬಿಂಗ್ ತಡೆದು ಮಾರುಕಟ್ಟೆ ದೃಷ್ಟಿಯಲ್ಲಿ ನೀವ್ ತೆಲುಗು ತಮಿಳನ್ ಏನ್ ಹಿಂದಾಕಿದಿರ?
ಇಲ್ಲಾ ಅಂದ್ಮೇಲೆ ಸುಮ್ನೆ ಯಾಕೆ ಜನ ಹಕ್ಕು ತಡೀತೀರ?ನೇರ ೩೦೦-೪೦೦ ಪರ ನುಡಿ ಚಿತ್ರಗಳಿಗೆ ತೆರೆ ಕೊಟ್ಟು ಈ ಹಂತಕ್ಕೆ ತಂದಮೇಲೆ.. ಅದು #ಕನ್ನಡೀಕರಣ ಆಗೇ ಬಿಡುಗಡೆ ಆಗಲಿ..
೩. ಇಂಗ್ಲಿಷ್ ಬಗ್ಗೆ ಪ್ರಶ್ನೆ.. ಪರಬಾಷೆ ಉಳಿದವೆಲ್ಲ ನಮ್ಮ ಬಾರತದ ಬಾಷೆ..
ಉ: ಕನ್ನಡಿಗನಿಗೆ ತನ್ನದಲ್ಲದ ಎಲ್ಲಾ ಬಾಶೆಯು ಪರನುಡಿಯೇ..
ಇಂಗ್ಲೀಷ್ ತತ್ ಕ್ಷಣ ದ ಅನಿವಾರ್ಯತೆ..ನಮಗೆ ವ್ಯಾಮೋಹ ಇಲ್ಲ..
ಅನ್ನ ಹಾಕೋ ಬಾಷೆ ಆಗಿದೆ.. ಬ್ರಿಟಿಷರ ವಸಾಹತುಶಾಹಿ ನಡೆ ಇದಕ್ಕೆ ಒಂದು ಕಾರಣ.
ನಮ್ಮ ನುಡಿಯಲ್ಲಿ ಇಂಗ್ಲೀಷ್ ಕಟ್ಟಿಕೊಂಡ ಎಲ್ಲಾ ಸಾದ್ಯತೆ ಕಟ್ಟಿಕೊಳ್ಳಬೇಕು ಇದು ನಿರಂತರ ಪ್ರಯತ್ನ..
ಇದಕ್ಕೆ ನುಡಿ ಹಮ್ಮುಗೆ / Language planning  ಬೇಕು..
*.ಡಬ್ಬಿಂಗ್/ಮಾತಚ್ಚು ಅನ್ನೋದು ಜಗತ್ತಿನ ಜ್ಞಾನ ,ಅರಿಮೆ, ಚಳಕ, ಮನೋರಂಜನೆ ಇವೆಲ್ಲವನ್ನೂ ಕನ್ನಡದಲ್ಲೇ ಪಡೆದು
"ನಮ್ಮ ಸುತ್ತ ವಾತಾವರಣ   ಕನ್ನಡಮಯ" ಮಾಡಿಕೊಳ್ಳುವ ಸಾದನ..ಅದು ಮನೋರಂಜನಾ ಕ್ಷೇತ್ರದಲ್ಲಿ  ಅಗಬೇಕಿರುವ ನುಡಿ ಹಮ್ಮುಗೆಯ ಒಂದು ಕೆಲಸ..
ಇಂಗ್ಲೀಷ್ ನಲ್ಲಿ ಡಬ್ಬಿಂಗ್ ಇಲ್ಲವೇ!!
ನ್ಯಾಯಾಲಯ ತೀರ್ಪಿಗೆ ಬೆಲೆ ಇಲ್ಲವ?
ನ್ಯಾಯಾಲಯದಲ್ಲಿ ಇವೆಲ್ಲ ವಾದ-ವಿವಾದ ಆಗೇ ತೀರ್ಪು ಬಂದಿದ್ದು.. ಆಯ್ತಾ..
ನಿಮ್ಮ್ ಮಾತ್ ಹೇಗಿದೆ ಅಂದ್ರೆ  ಡಬ್ಬಿಂಗ್ ಬಂದ್ರೆ  ಕನ್ನಡ ಚಿತ್ರಗಳೇ ನಿಂತಹೋಗ್ತವೆ ಅನ್ನೋ ಹಾಗಿದೆ!?
ಅಷ್ಟು ಪೊಳ್ಳೆ ಹಾಗಾದರೆ ಚಿತ್ರರಂಗ!
ಪೈಪೋಟಿ ಕೊಟ್ಟಿ ಗೆಲ್ಲಿ ಒಳ್ಳೆ ತಂತ್ರಜ್ಞ ಇತ್ಯಾದಿ ನಮ್ಮಲ್ಲೂ ಇದಾರೆ ಅಂತಿರಲಾ ಮತೆ.. ನಿಮ್ಮದು ಉದ್ಯಮ #charity ಅಲ್ಲ.. #ಕನ್ನಡೀಕರಣ ಮುಖ್ಯ.. ಇಲ್ಲೇ ಗೆದ್ದಿಲ್ಲಾ ಅಂದ್ರೆ ಪ್ರಜಾಕೀಯ ಗೆಲುವು ಹೇಗೆ..
ಜಪಾನ್ ಉದಾ ಕೊಡ್ತೀರಾ!? ಜಪಾನ್ ಅಲ್ಲಿ ಡಬ್ಬಿಂಗ್ ಇದ್ಯೋ ಇಲ್ವೋ ನೋಡಿ!!
#KGF ಡಬ್ ಆಗಿ ತನ್ನ ಮಾರುಕಟ್ಟೆ ವಿಸ್ತರಣೆ ಮಾಡಿ ನಮ್ಮ ಕನ್ನಡ ಚಿತ್ರ ಎಲ್ಲಾ ಕಡೆ ತಲುಪುತಿದೆ !? ಈಗ ಬೆನ್ನು ತಟ್ಟು ಕೊಳ್ಳುತ್ತಿರ? ಇಬ್ಬಂದಿ/hypocrisy ನಡೆ ಇದು..
ಒಳ್ಳೆ ಚಿತ್ರ  #kgf ತರ ಬಂದ್ರೆ ಗೇಲ್ಸ್ತಾರೆ ..

ಪ್ರತಿಯೊಂದು ಚಿತ್ರ ರಿಮೇಕ್ ಮಾಡಲು ಕಾರಣ ಡಬ್ಬಿಂಗ್ ನಿರ್ಬಂಧ.. ತಮಿಳು ತೆಲುಗು ನಡುವೆ ಡಬ್ಬಿಂಗ್ ಇರೋದ್ರಿಂದ ರಿಮೇಕ್ ಕಡಿಮೆ..
ಡಬ್ಬಿಂಗ್ ಹೆಚ್ಚು ಹೆಚ್ಚು ಮುಖ್ಯವಾಹಿನಿಗೆ ಬಂದಮೇಲೆ ತೆಲುಗು/ತಮಿಳು ಚಿತ್ರ ರಂಗದ ತರವೇ ಇಲ್ಲೂ ರಿಮೇಕ್ ಬಗ್ಗೆ
ನಿಲುವು ಬರತ್ತೆ..
  ಒಟ್ನಲ್ಲಿ ಜನಗಳ ಹಕ್ಕನ್ನು ಪರೋಕ್ಷವಾಗಿ ತೆರೆ ಹಿಂದೆ ಯಾಕೆ ತಡೀಬೇಕ್.. ಅವರ್ಗೆ ಇಷ್ಟ ಆದ್ರೆ ಗೇಲ್ಸ್ತಾರೆ ಇಲ್ಲಾದ್ರೆ ಸೋಲ್ಸ್ತರೆ ಡಬ್ಬಿಂಗ್ ಆದ್ರು ಅಷ್ಟೇ ನೇರ ಕನ್ನಡ ಚಿತ್ರ ಅದ್ರು ಅಷ್ಟೇ...
ಈ ಜಾಗತೀಕರಣದ ಯುಗದಲ್ಲಿ ಡಬ್ಬಿಂಗ್ ಪ್ರಸ್ತುತ ಮತ್ತು ಬಾಷೆ ಉಳಿವಿಗೆ ಸಾದನ..
ಬಾರತೀಯ ಸ್ಪರ್ಧಾ ಆಯೋಗ,universal/Barcelona declaration f linguistic rights ಕೂಡ ಡಬ್ಬಿಂಗ್ ಭಾಷೆ ಉಳಿಸುವುದಕ್ಕೆ ಇರೋ ಸಾಧನ ಅದ್ನ ತಡಿಬಾರ್ದ್ ಅಂತ ಹೇಳಿದೆ.

ಸಾದ್ಯ ವಾದರೆ ಈ ಕೇಳ್ವಿಗೆ ಉತ್ತರ ಕೊಡಿ : ಕೆಳಗಿನ ಕೊಂಡಿ ಒತ್ತಿ:
ಉಪ್ಪಿಗಾಗಿ ಕೇಳ್ವಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ಣಾಟಕ ತತ್ ಕ್ಷಣದಲ್ಲಿ ಮಾಡಬೇಕಾದ ಕೆಲಸ; Things to do for wellness of Karnataka and hence India

1.ಸರೋಜಿನಿ ಮಹಿಶಿ ವರದಿ ಅನುಷ್ಠಾನ,  ನ್ಯಾಯಾಲಯದಲ್ಲಿ ಪ್ರಶ್ನಾತೀರ್ತ ಕಾನೂನು ಕಾಯ್ದೆ ಜಾರಿ. 2.ಬಂಡೀಪುರ-ಕೇರಳ ದಾರಿಯ ಹೆದ್ದಾರಿ ತಡೆಹಿಡಿರಿ; ಇದರಿಂದ ಕರ್ನಾಟಕ ಕ್ಕೆ ಒಳಿತು ಇಲ್ಲ,ಕಾಡು ಹಾಳು, ಮಳೆಯು ಕಮ್ಮಿ ಆಗತ್ತೆ. ಈತರ ಯಾವುದೇ ಹೆದ್ದಾರಿ,ರೈಲ್ವೆ ಬಾಗ ಇಂತಹ ಪಶ್ಚಿಮ ಘಟ್ಟ ಮತ್ತು ಕೊಡಗು ಬಾಗದಲ್ಲಿ ಬೇಡ.. 3. #IBPS ಮೋಸ ;೨೦೧೪ ರ ನಿಯಮ ಬೇಕು. ಆಮೇಲೆ ಇನ್ಮುಂದೆ ಕೇಂದ್ರೀಕರಣಗೊಳಿಸುವಾಗ; ಅದಕ್ಕೆ ರಾಜ್ಯ ಮುಂಜಾಗುರತೆ ವಹಿಸಬೇಕು. ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕ್ ಗಳನ್ನು ನಾವು ವಿಲೀನದ ಹೆಸರಿನಲ್ಲಿ ಕಳೆದು ಕೊಳ್ಳುತ್ತಿದ್ದೇವೆ. 4. ಎಲ್ಲಾ ಕೊಳ್ಳುಗ/ಗ್ರಾಹಕ ಸೇವೆಯೂ ಕರುನಾಡಲ್ಲಿ ಕನ್ನಡದಲ್ಲಿ ಬೇಕು. ಬಳಸುವ ಸೇವೆ,ವಸ್ತು,ಅರಿಮೆ,ಚಳಕ.. ಇದಕ್ಕೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಕೇಳ್ವಿ/ಪ್ರಶ್ನೆ ಬಾರದಂತೆ.. ಒಂದು ಕಾಯ್ದೆ ಕಾನೂನು ಕಟ್ಟಳೆ ಮಾಡಿ.ಮಂಡಿಸಿ.. ಉದಾ: ೧.ಬ್ಯಾಂಕ್ ಸೇವೆ, ಇಲ್ಲಿ ಮಾರಾಟವಾಗುವ ಉತ್ಪನ್ನ ಗಳ ಮೇಲೆ ಕನ್ನಡ. ೨.ಔಷದಿ, ಮದ್ದು,ಅರವಳಿಕೆ ಗಳ ಮೇಲೆ  ಮಾಹಿತಿ ಕನ್ನಡದಲ್ಲಿ ಇದ್ದರೆ ಜನರಿಗೆ ಅದರ ಬಗ್ಗೆ ತಿಳಿದು ಬಳಸಲು ಸೂಕ್ತ. ೩.ಗ್ಯಾಸ್ ಇತ್ಯಾದಿ ಮೇಲೆ ಕನ್ನಡ ದಲ್ಲಿ ಸುರಕ್ಷತಾ ನಿಯಮ ಬೇಕು. ೪. ಹೆಸರು ಪಟ್ಟಿ/ ನಮ ಫಲಕ ಕನ್ನಡ ಹೆಚ್ಚಾಗಿ /ದೊಡ್ಡದಾಗಿ ಇರಬೇಕು. ಒಟ್ಟಿನಲ್ಲಿ ಒಂದು ಸಮಗ್ರ ಕಾನೂನು ಬೇಕು. 5.ಕೊಡಗು ಅಂತಹ ಜಾಗದಲ್ಲೂ ವಲಸೆ ಎಲ್ಲೆ ಮೀರಿದೆ....

ಉಪ್ಪಿಗಾಗಿ ನನ್ನ ಕೇಳ್ವಿ ಮತ್ತು ಮನವಿ

3 ಕೇಳ್ವಿಗಳು ಮತ್ತು ಮನವಿ: ೧. ಜಾಗತೀಕರಣದ ಹಿನ್ನೆಲೆಯಿಂದ  ಜಗತ್ತಿನ ಎಲ್ಲಾ ಅರಿಮೆ, ಜ್ಞಾನ, ಆಟ,ಮನೋರಂಜನೆ ಮಾತೃ ಬಾಷೆಲಿ ಪಡೆಯಲು  ಡಬ್ಬಿಂಗ್/ಮಾತಚ್ಚು ಅತಿ ಅವಶ್ಯಕ. ಇದಕ್ಕೆ ಕನ್ನಡ ಮಾರುಕಟ್ಟೆ ಚಿಕ್ಕದು/ಕೆಲಸ ಹೋಗತ್ತೆ ಇವೆಲ್ಲ ಡೋಂಗಿ ಉತ್ತರ..ಮಾರುಕಟ್ಟೆ ಚಿಕ್ಕದು ಮಾಡಿಕೊಂಡು ಬಾವಿಯಲ್ಲಿನ ಕಪ್ಪೆ ತನ ತೋರದಕ್ಕೆ KFI ಕಾರಣ. *.Artificial Intelligence/ಕೃತಕ ಜಾಣ್ಮೆ ಬಂದ್ರೆ ಇರೋ ಸಾಫ್ಟ್ವೇರ್ ಜನ ಕೆಲ್ಸ ಕಳ್ಕೊತಾರೆ ಅನ್ನೋದು ಸರಿನ? ನಾವು ಪೈಪೋಟಿ ಮಾಡಿ ಜಯಿಸ್ತಿವ್ ಅನ್ನೋದ್ ಸರಿನ? *.ಈಗ ದೊಡ್ಡ ಬ್ಯಾನರ್ ಅವ್ರು ಇಲ್ಲಿನವರ್ಗೆ ಎಷ್ಟ್ ಕೆಲ್ಸ ಕೊಡ್ತಾರ್? ಡಬ್ಬಿಂಗ್ ಸ್ಟುಡಿಯೋ ಸೇರಿದಂತೆ ,ಸಂಭಾಷಣೆ, ಹಾಡು ಇತ್ಯಾದಿ ಜನಕ್ಕೆ ಕೆಲಸ ಸಿಗೋದ್ರು ಜೊತೆಗ್ ನಮ್ಮಲ್ಲೂ ತಮಿಳು/ತೆಲುಗು/ಹಿಂದಿ ಪೈಪೋಟಿ(ಮಾರುಕಟ್ಟೆ ದೃಷ್ಟಿ) ಮಾಡೋ ಅನಿವಾರ್ಯತೆ ಬಂದು ಒಳ್ಳೆದೆ ಆಗತ್ತೆ. ಕ್ರಮೇಣ ನೇರ ತೆರೆ ಬಿಡುಗಡೆ ಕಮ್ಮಿ ಆಗತ್ತೆ(ಇದಕ್ಕೆ ಕಾರಣ KFI ಹತೋಟಿ ಕೂಟಗಳು, ನೇರ 400 ತೆರೆ ಕೊಡ್ತೀವಿ ಡಬ್ಬಿಂಗ್  ಮಾಡ್ಬೇಡಿ ಅಂದ್ರೆ ಹೇಗ್ ಬೆಳಿಯತ್ತೆ ). ಹೇಗೂ  ಪರಭಾಷೆಗೆ ೩೦೦-೪೦೦  ನೇರ ತೆರೆ ಕೊಟ್ಟು ನಮ್ ಜನ ಕನ್ನಡ ನೋಡಲ್ಲ ಅಂತ ಹೇಳ್ತೀರಾ? ನೋಡಕ್ ಅವಕಾಶ ಕೊಡಲ್ಲ? ಇಲ್ಲಿ ಇರೋ ಬಾಷಾ ಅಲ್ಪ ಸಂಖ್ಯಾತರಿಗೆ ಅವರ ನುಡಿಲಿ ನೇರ ಚಿತ್ರ ನೋಡೋಕೆ ಸಿಗತ್ತೆ.(ತಮಿಳ್ ಚಿತ್ರ ತೆಲುಗು ಡಬ್ ಆಗಿ ಬಿಡ್ತಾರೆ). ...