ವಿಷಯಕ್ಕೆ ಹೋಗಿ

ಕರ್ಣಾಟಕ ತತ್ ಕ್ಷಣದಲ್ಲಿ ಮಾಡಬೇಕಾದ ಕೆಲಸ; Things to do for wellness of Karnataka and hence India

1.ಸರೋಜಿನಿ ಮಹಿಶಿ ವರದಿ ಅನುಷ್ಠಾನ,  ನ್ಯಾಯಾಲಯದಲ್ಲಿ ಪ್ರಶ್ನಾತೀರ್ತ ಕಾನೂನು ಕಾಯ್ದೆ ಜಾರಿ.
2.ಬಂಡೀಪುರ-ಕೇರಳ ದಾರಿಯ ಹೆದ್ದಾರಿ ತಡೆಹಿಡಿರಿ; ಇದರಿಂದ ಕರ್ನಾಟಕ ಕ್ಕೆ ಒಳಿತು ಇಲ್ಲ,ಕಾಡು ಹಾಳು, ಮಳೆಯು ಕಮ್ಮಿ ಆಗತ್ತೆ.
ಈತರ ಯಾವುದೇ ಹೆದ್ದಾರಿ,ರೈಲ್ವೆ ಬಾಗ ಇಂತಹ ಪಶ್ಚಿಮ ಘಟ್ಟ ಮತ್ತು ಕೊಡಗು ಬಾಗದಲ್ಲಿ ಬೇಡ..
3. #IBPS ಮೋಸ ;೨೦೧೪ ರ ನಿಯಮ ಬೇಕು.
ಆಮೇಲೆ ಇನ್ಮುಂದೆ ಕೇಂದ್ರೀಕರಣಗೊಳಿಸುವಾಗ; ಅದಕ್ಕೆ ರಾಜ್ಯ ಮುಂಜಾಗುರತೆ ವಹಿಸಬೇಕು.
ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕ್ ಗಳನ್ನು ನಾವು ವಿಲೀನದ ಹೆಸರಿನಲ್ಲಿ ಕಳೆದು ಕೊಳ್ಳುತ್ತಿದ್ದೇವೆ.

4. ಎಲ್ಲಾ ಕೊಳ್ಳುಗ/ಗ್ರಾಹಕ ಸೇವೆಯೂ ಕರುನಾಡಲ್ಲಿ ಕನ್ನಡದಲ್ಲಿ ಬೇಕು.
ಬಳಸುವ ಸೇವೆ,ವಸ್ತು,ಅರಿಮೆ,ಚಳಕ..

ಇದಕ್ಕೆ ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಕೇಳ್ವಿ/ಪ್ರಶ್ನೆ ಬಾರದಂತೆ.. ಒಂದು ಕಾಯ್ದೆ ಕಾನೂನು ಕಟ್ಟಳೆ ಮಾಡಿ.ಮಂಡಿಸಿ..

ಉದಾ:
೧.ಬ್ಯಾಂಕ್ ಸೇವೆ, ಇಲ್ಲಿ ಮಾರಾಟವಾಗುವ ಉತ್ಪನ್ನ ಗಳ ಮೇಲೆ ಕನ್ನಡ.

೨.ಔಷದಿ, ಮದ್ದು,ಅರವಳಿಕೆ ಗಳ ಮೇಲೆ  ಮಾಹಿತಿ ಕನ್ನಡದಲ್ಲಿ ಇದ್ದರೆ ಜನರಿಗೆ ಅದರ ಬಗ್ಗೆ ತಿಳಿದು ಬಳಸಲು ಸೂಕ್ತ.
೩.ಗ್ಯಾಸ್ ಇತ್ಯಾದಿ ಮೇಲೆ ಕನ್ನಡ ದಲ್ಲಿ ಸುರಕ್ಷತಾ ನಿಯಮ ಬೇಕು.
೪. ಹೆಸರು ಪಟ್ಟಿ/ ನಮ ಫಲಕ ಕನ್ನಡ ಹೆಚ್ಚಾಗಿ /ದೊಡ್ಡದಾಗಿ ಇರಬೇಕು.

ಒಟ್ಟಿನಲ್ಲಿ ಒಂದು ಸಮಗ್ರ ಕಾನೂನು ಬೇಕು.

5.ಕೊಡಗು ಅಂತಹ ಜಾಗದಲ್ಲೂ ವಲಸೆ ಎಲ್ಲೆ ಮೀರಿದೆ. ವಲಸಿಗ ನೀತಿ ಬಗ್ಗೆ ನಾಂದಿ ಹಾಡಿ.
6.TFR Rate /ಹೆರುವೆಣಿಕೆ ಯಲ್ಲಿ ಕರ್ಣಾಟಕ 1.7ಗೆ ಇಳಿದಿದೆ. ಇನ್ನೂ ಮುಂದೆ  ಇಷ್ಟೇ ನಡೆಸಿ/ 2 ಕ್ಕೆ ತನ್ನಿ..
ಕೇಂದ್ರದ ಜನಸಂಖ್ಯಾ ನಿಯಂತ್ರಣ ಯೋಜನೆಗಳು ನಾವು ಉತ್ತರ ರಾಜ್ಯಗಳ ತರ ಪಾಲಿಸುವುದು ಬೇಡ.
7.ಸರ್ಕಾರಿ ಮಿಂದಾಣ/ ವೆಬ್ಸೈಟ್ ಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನ.. ಮತ್ತು ಹೆಚ್ಚು ಕನ್ನಡ ಪದಗಳೇ ಬಳಸಿ..
ಅದು ಸಂಸ್ಕೃತ/ ನೇರ ಆಂಗ್ಲ ಪದಗಳೇ ಕಾಣುತ್ತವೆ.. ಜನಸಾಮಾನ್ಯರಿಗೆ ಅರಿಯಲು ಕಶ್ಟ.
ಎಲ್ಲಾ ಕಡೆಯೂ ಅಶ್ಟೇ;
 ಉದಾ:  1.ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ.
 ಇದರ ಬದಲು;
ಹೆಲ್ಮೆಟ್ ಹಾಕೊಂಡು ಗಾಡಿ ಓಡ್ಸಿ.
2.ನಿರ್ಗಮನ/ ಆಗಮನ
ಹೋಗುವುದು/ಬರೋದು.
8. ಉನ್ನತ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಕನ್ನಡ ಪರ ಕೃಷಿ ಆಗಬೇಕು. ಮತ್ತು ಓದಿದ ನಂತರ "ಕನ್ನಡ" ಕೆಲಸ ಕೊಡೋ ಹಾಗೆ ಆಗಬೇಕು.
ಸಮಕಾಲೀನ ಸಾಹಿತ್ಯ ಬೇಕು, ಅರಿಮೆ ಚಳಕ ಬಗ್ಗೆಇದಕ್ಕೆ ಇಂಬು ಕೊಡಿ.

"ಕನ್ನಡಕ್ಕೆ" ನುಡಿ ಹಮ್ಮುಗೆ/ LANGUAGE PLANNING ಬೇಕು. How to make kannada relevant and thrive with respect to its current sorrounding.
Ex: Hibrew, English,German, Japanese,Mandarin etc.
9.ಕನ್ನಡ ಮಾದ್ಯಮದಲ್ಲೇ ಶಿಕ್ಷಣ ಇರಲಿ, ಸರ್ಕಾರಿ ಶಾಲೆ ಗುಣಮಟ್ಟ ಹೆಚ್ಚಿಸಿ. ಇಂಗ್ಲೀಷ್ ಒಂದು ನುಡಿಯಾಗಿ ಚೆನ್ನಾಗಿ ಕಲಿಸಿ. ಸರ್ಕಾರಿ ಶಾಲೆಲಿ ಓದಿದವರಿಗೆ ಸರ್ಕಾರಿ ಕೆಲಸ ಸೂಕ್ತ.
10. KPTCL ಅಲ್ಲಿ  ಮೊನ್ನೆ  ಕೆಲಸದ ವಿಷಯದಲ್ಲಿ ಆದ ಅನ್ಯಾಯ ಸರಿಪಡಿಸಿ.
ಇದು ಮರುಕಳಿಸದಂತೆ ಮಾಡಿ.

11. ಕರ್ನಾಟಕ ದಲ್ಲಿ ಪ್ರತಿಯೊಂದು ಹೊರಗಿನವರಿಗೆ ಗುತ್ತಿಗೆ/ out sourcing..
ಇಲ್ಲಿನವರಿಗೆ entrepreneurs ಆಗಿ ಮಾಡಲು ತಳಮಟ್ಟದಿಂದ ಕೆಲಸ ಆಗಬೇಕು.
12.ಉತ್ತರ ಕರ್ನಾಟಕ ,ಕೊಪ್ಪಳ ಇತ್ಯಾದಿ ಕಡೆ ನೀರಿಲ್ಲದೆ ಬೆಳೆ ಬೆಳೆಯದೆ ಇಲ್ಲಿಗೆ ವಲಸೆ ಬರ್ತಿದ್ದಾರೆ..
ಅಲ್ಲಿ ಕ್ರಿಷ್ಣ ಮೇಲ್ದಂಡೆ ಯೋಜನೆ ಬೇಗ ಮುಗಿಯಲಿ.

13.  ನೀರು ಹೆಚ್ಚು ಕೇಳುವ ಬೆಳೆ ಯಾದ ಕಬ್ಬು ಬೆಳೆಸಿ ಅದನ್ನು ಮಾರಲು ಕಾರ್ಖಾನೆ/ ದಾಸ್ತಾನು( ರಾಜಕೀಯ ನಾಯಕರೇ ಇದರ ಮಾಲೀಕರು) ಪಡೋ ರೈತರ ಗೋಳು ಯಾರು ಕೇಳೋರು..
ಆದ್ದರಿಂದ  ಅರಿಮೆಯ ವ್ಯವಸಾಯ/scientific forming ಬೇಕು.. ನೀರು ಕಡಿಮೆ ಕೇಳೋ ಬೆಳೆ ಬೆಳೆಯಲಿ.
ದಲ್ಲಾಳಿ ರಹಿತ ಒನ್ಲೈನ್ ಮಾರಾಟ ಸೇವೆ ಮತ್ತು ಅದನ್ನು ಪಡೆಯಲು ರೈತನಿಗೆ ಬೇಕಾದ ಮಾಹಿತಿ ತಲುಪಿಸಬೇಕು.

14.ಇಲ್ಲಿ ಇರುವ ತುಳುವ/ಕೊಡವ ಜನಾಂಗದ ನುಡಿ ಬೇಡಿಕೆಗೂ ಸ್ಪಂದಿಸಿ.. ಯಾಕಂದ್ರೆ ಮುಂದೆ ಅದು ಪ್ರತ್ಯೇಕತೆಯ ಕೂಗು ಆಗಬಾರದು #ಕರ್ಣಾಟಕಒಂದೇ
15.ಕೇಂದ್ರೀಕರಣ ಮೂಲಕ ತಾಜ್ಯದ ಸಾರ್ವಬೌಮತ್ವಕ್ಕೆ ಎಲ್ಲೇ ದಕ್ಕೆ ಆದರೂ ಸೆಟೆದು ನಿಲ್ಲಿ.ಕರ್ನಾಟಕದ ಏಳ್ಗೆಯಲ್ಲೇ ಬಾರತದ ಏಳ್ಗೆ.
ಉತ್ತರ/ ಬಡಗಣ ಬಾಗದ ಜನಕ್ಕೆ ಹೆಚ್ಚು ಯೋಜನೆ ಹಾಕಿ, Tier_2 ನಗರ ಬೇಕು..
ಬೆಂಗಳೂರು ಒಂದರ ಮೇಲೆ ನಮ್ಮ  ಅವಲಂಬನೆ ತಪ್ಪಬೇಕು.
IT/ಮಾಹಿತಿ ತಂತ್ರಜ್ಞಾನ ನಮ್ಮ ರಾಜ್ಯದ ದೊಡ್ಡ ಆದಾಯ ಮೂಲ.
ಪ್ರವಾಸೋದ್ಯಮ ಮೇಲೂ ಗಮನ ಹರಿಸಿ.
Flexible/sustainable economic model beku. Ex:TN industry/agriculture/IT balance agide.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಉಪ್ಪಿಗಾಗಿ ನನ್ನ ಕೇಳ್ವಿ ಮತ್ತು ಮನವಿ

3 ಕೇಳ್ವಿಗಳು ಮತ್ತು ಮನವಿ: ೧. ಜಾಗತೀಕರಣದ ಹಿನ್ನೆಲೆಯಿಂದ  ಜಗತ್ತಿನ ಎಲ್ಲಾ ಅರಿಮೆ, ಜ್ಞಾನ, ಆಟ,ಮನೋರಂಜನೆ ಮಾತೃ ಬಾಷೆಲಿ ಪಡೆಯಲು  ಡಬ್ಬಿಂಗ್/ಮಾತಚ್ಚು ಅತಿ ಅವಶ್ಯಕ. ಇದಕ್ಕೆ ಕನ್ನಡ ಮಾರುಕಟ್ಟೆ ಚಿಕ್ಕದು/ಕೆಲಸ ಹೋಗತ್ತೆ ಇವೆಲ್ಲ ಡೋಂಗಿ ಉತ್ತರ..ಮಾರುಕಟ್ಟೆ ಚಿಕ್ಕದು ಮಾಡಿಕೊಂಡು ಬಾವಿಯಲ್ಲಿನ ಕಪ್ಪೆ ತನ ತೋರದಕ್ಕೆ KFI ಕಾರಣ. *.Artificial Intelligence/ಕೃತಕ ಜಾಣ್ಮೆ ಬಂದ್ರೆ ಇರೋ ಸಾಫ್ಟ್ವೇರ್ ಜನ ಕೆಲ್ಸ ಕಳ್ಕೊತಾರೆ ಅನ್ನೋದು ಸರಿನ? ನಾವು ಪೈಪೋಟಿ ಮಾಡಿ ಜಯಿಸ್ತಿವ್ ಅನ್ನೋದ್ ಸರಿನ? *.ಈಗ ದೊಡ್ಡ ಬ್ಯಾನರ್ ಅವ್ರು ಇಲ್ಲಿನವರ್ಗೆ ಎಷ್ಟ್ ಕೆಲ್ಸ ಕೊಡ್ತಾರ್? ಡಬ್ಬಿಂಗ್ ಸ್ಟುಡಿಯೋ ಸೇರಿದಂತೆ ,ಸಂಭಾಷಣೆ, ಹಾಡು ಇತ್ಯಾದಿ ಜನಕ್ಕೆ ಕೆಲಸ ಸಿಗೋದ್ರು ಜೊತೆಗ್ ನಮ್ಮಲ್ಲೂ ತಮಿಳು/ತೆಲುಗು/ಹಿಂದಿ ಪೈಪೋಟಿ(ಮಾರುಕಟ್ಟೆ ದೃಷ್ಟಿ) ಮಾಡೋ ಅನಿವಾರ್ಯತೆ ಬಂದು ಒಳ್ಳೆದೆ ಆಗತ್ತೆ. ಕ್ರಮೇಣ ನೇರ ತೆರೆ ಬಿಡುಗಡೆ ಕಮ್ಮಿ ಆಗತ್ತೆ(ಇದಕ್ಕೆ ಕಾರಣ KFI ಹತೋಟಿ ಕೂಟಗಳು, ನೇರ 400 ತೆರೆ ಕೊಡ್ತೀವಿ ಡಬ್ಬಿಂಗ್  ಮಾಡ್ಬೇಡಿ ಅಂದ್ರೆ ಹೇಗ್ ಬೆಳಿಯತ್ತೆ ). ಹೇಗೂ  ಪರಭಾಷೆಗೆ ೩೦೦-೪೦೦  ನೇರ ತೆರೆ ಕೊಟ್ಟು ನಮ್ ಜನ ಕನ್ನಡ ನೋಡಲ್ಲ ಅಂತ ಹೇಳ್ತೀರಾ? ನೋಡಕ್ ಅವಕಾಶ ಕೊಡಲ್ಲ? ಇಲ್ಲಿ ಇರೋ ಬಾಷಾ ಅಲ್ಪ ಸಂಖ್ಯಾತರಿಗೆ ಅವರ ನುಡಿಲಿ ನೇರ ಚಿತ್ರ ನೋಡೋಕೆ ಸಿಗತ್ತೆ.(ತಮಿಳ್ ಚಿತ್ರ ತೆಲುಗು ಡಬ್ ಆಗಿ ಬಿಡ್ತಾರೆ). ...

ಉಪೇಂದ್ರ ಅವರ ಕೇಳ್ವಿಗೆ ಮರು ಕೇಳ್ವಿ/ಉತ್ತರ

ಡಬ್ಬಿಂಗ್  ಕನ್ನಡಕ್ಕೆ ಬೇಕು ಅನ್ನೋದರಲ್ಲೇ ಉಪೇಂದ್ರ ಅವರ  ಗೊಂದಲಮಯ ನಿಲುವು ಮತ್ತು ಜನರ ಮಿಡಿತ/ಹಕ್ಕು ಅರಿಯುವ ಕೊರತೆಯನ್ನು ತೋರಿಸತ್ತೆ.. ಅವರ ಪ್ರಶ್ನೆಗಳಿಗೆ ಉತ್ತರ: ೧.ಪರಬಾಷಾ ಚಾನೆಲ್ ಗೆ ಸಂದರ್ಶನ ಬಾಗ.. ನೀವ್ ಸತ್ಯವನ್ನೇ ಹೇಳಿದ್ದರೆ ಅದಕ್ಕೆ ನೇರ ಉತ್ತರ: "ಕರ್ನಾಟಕದಲ್ಲಿನ ಡಬ್ಬಿಂಗ್ ನಿಷೇಧವೆ ಪರಬಾಷೆ ಚಿತ್ರಗಳ ಮಾರುಕಟ್ಟೆ ಹೆಚ್ಚಣಕ್ಕೆ ಪರೋಕ್ಷ ಕಾರಣ". ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಡೋ ಮರು ಪ್ರಶ್ನೆ ಹಾಕ್ತಿರ.. ೨.ನೇರ ಬಿಡುಗಡೆ vs (ನೇರ ತೆರೆ ಬಿಡುಗಡೆ+ ಡಬ್ಬಿಂಗ್ ) ಯಾವುದು ಬೇಕು.. ಇದರಿಂದ ಕನ್ನಡಕ್ಕೆ ತೊಂದರೆ ಆಗಲ್ವಾ?? ಉ: ತೆಲುಗು ತಮಿಳರಂತೆ ಡಬ್ಬಿಂಗ್  ಆಸ್ಪದ ಕೊಟ್ಟಿದ್ರೆ ; ಈ ಚರ್ಚೆಯೇ ಇರ್ತಿರ್ಲಿಲ್ಲ.. ನಮ್ಮ ಸಂವಿದಾನದ ಪ್ರಕಾರ ನೇರ ಪರಬಾಷೆ ತಡೆಯಲು ಸಾದ್ಯವಿಲ್ಲ ಆದರೆ ಡಬ್ಬಿಂಗ್ ಅನ್ನು ಮುಖ್ಯವಾಹಿನಿ ಗೆ ತಂದಾಗ ಕ್ರಮೇಣ ಜನ ಉತ್ತಮ ಗುಣಮಟ್ಟದ ಡಬ್ಬಿಂಗ್ ಚಿತ್ರ ವನ್ನೇ ನೋಡಲು ಮುಂದಾಗ್ತಾರೆ..(೮೦-೨೦ ಅನುಪಾತ ದಲ್ಲಿ ಬಿಡುಗಡೆ ಆದರೂ ಅದು ದೊಡ್ಡ ಸಾದನೆ) ಇಷ್ಟು ದಿನ ಡಬ್ಬಿಂಗ್ ತಡೆದು ಪರನುಡಿ ನೇರ ನೋಡೋ ಹಾಗೆ ಅನಿವಾರ್ಯ ಮಾಡಿ; ಡಬ್ಬಿಂಗ್ ಚಿತ್ರ ನೋಡೋಕೆ ಅವಕಾಶ ಕೊಡದೆ; ಕನ್ನಡಿಗರು ಪರನುಡಿ ಚಿತ್ರ ನೋಡ್ತಾರೆ ಅಂತ ಬೊಬ್ಬೆ ಹೊಡಿದ್ರೆ?? ಈಗ ಸುಮಾರು ಪೆಟ್ಟು ಕೊಟ್ಟಿದ್ದೀರಿ ; ತಕ್ಷಣ ಅಲ್ಲದಿದ್ದರೂ ಕ್ರಮೇಣ ನೇರ ನುಡಿ ಬಿಡುಗಡೆ ಇಳಿಮುಖ ಆಗತ್ತೆ.. ಕರ್ನಾಟ...